ಹೊಗೆ ಇಲ್ಲದ ವಿದ್ಯುತ್ ಕಾರು ರೆವಾ

ಇಂದು ಮಹಾನಗರದಲ್ಲಿ ಲಕ್ಷಾಂತರ ವಾಹನಗಳ ಭರಾಟೆಯಿಂದಾಗಿ ಲಕ್ಷೋಪಲಕ್ಷ ಗ್ಯಾಲನ್ ಇಂಗಾಲಡೈಆಕ್ಸೈಡ್ ಹೊಗೆ ಕಾರಿ ಪರಿಸರಕ್ಕೆ ಮಹಾಹಾನಿಯಾಗುತ್ತದೆ, ಜೀವಸಂಕುಲಗಳ ನಾಶವಾಗುತ್ತದೆ. ಜೀವಕೋಶಗಳಿಗೆ ಹಾನಿಯಾಗಿ ಅನೇಕ ರೋಗಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಇದು ಪರಿಸರವಾದಿಗಳ ಮತ್ತು ಜನಸಮುದಾಯದ ಕೂಗು! ಕಾಲ ಕಳೆದಂತೆ ಈ ಹೊಗೆಯ ದೈತ್ಯ ಆಕ್ರಮಣದಿಂದಾಗಿ ‘ಓಜೋನ್’ ಪದರಿಗೆ ಇನ್ನಷ್ಟು ತೂತು ಬಿದ್ದು ಮಹಾ ಅಪಾಯವಾಗುವ ಸಂದರ್ಭ ನಿರ್ಮಾಣವಾಗುತ್ತದೆ, ಇಂತಹ ಸಂದರ್ಭದಲ್ಲಿ ಹೊಗೆಯೇ ಇಲ್ಲದ ಸದ್ದೇಮಾಡದ ವಾಹನಗಳು ರಸ್ತೆಗಿಳಿದರೆ ಅದಕ್ಕಿಂತ ಬೇರೆ ಸ್ವರ್ಗ ಬೇರೊಂದಿಲ್ಲ ಎಂಬ ಕನಸು ಎಲ್ಲರದು. ಈ ಕನಸನ್ನು ಸ್ವಲ್ಬ ಪ್ರಮಾಣದಲ್ಲಾದರೂ ನನಸು ಮಾಡುವಂತೆ ಆಶಾಕಿರಣಗಳು ಮೂಡುತ್ತಿವೆ.

ಇಂತಹ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡೇ ಚಿಂತಿಸಿ ಅಧ್ಯಯನ ಮಾಡಿದ ‘ಥಾಮಸ್ ಎಡಿಸನ್’ ಎಂಬ ವಿಜ್ಞಾನಿ ಇದೀಗ ಎಲೆಕ್ಟ್ರಿಕಲ್ ಕಾರುಗಳನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಆಶ್ಚರ್ಯವೆಂದರೆ ಈ ಕಾರಿಗೆ ಇಂಜಿನ್ ಇಲ್ಲ ಕ್ಲಚ್, ಗೇರ್ ಮತ್ತು ರೇಡಿಯೇಟರ್‌ಗಳ ರಗಳೆ ಇಲ್ಲ ಮೋಟಾರಿನಿಂದ ಚಕ್ರಗಳಿಗೆ ಶಕ್ತಿ (Power) ಯು ನೇರವಾಗಿ ಮೇನ್‌ಗೇರ್ ಮೂಲಕ ಕಡಿತ ಅನುಪಾತ 7:1 ರ ಪ್ರಮಾಣದಲ್ಲಿ ಹರಿಯುತ್ತದೆ. ಹಿಂಭಾಗದ ಚಕ್ರಗಳಿಗೆ ಶಕ್ತಿಯು ಪ್ರವಹಿಸುವ ತಂತ್ರಜ್ಞಾನವನ್ನು ಅಳವಡಿಸಿದ್ದು ಮುಂದಿನ ಚಕ್ರಗಳು ತಳ್ಳುಶಕ್ತಿಯಿಂದ ಚಲಿಸುತ್ತವೆ. ಎಂಜಿನ್ ರಹಿತ, ಸಾಂಪ್ರದಾಯಿಕ ಗೇರ್ ಕ್ಲಚ್ ವ್ಯವಸ್ಥೆ ಇಲ್ಲದ ಈ ಕಾರಿನ ತಯಾರಿಕೆ ವಾಹನ ತಯಾರಿಕೆಯಲ್ಲಿನ ಕ್ರಾಂತಿಕಾರಕ ಹೆಜ್ಜೆಎನಿಸಿದೆ. ಇಂತಹ ವಿದ್ಯುತ್ ಶಕ್ತಿಯಿಂದ ಚಲಿಸುವ ವಾಹನಗಳಿಗೆ ಎಲೆಕ್ಟ್ರಿಕಲ್ ವೆಹಿಕಲ್ಸ್ (E.T.) ತಂತ್ರಜ್ಞಾನ ಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಇಂತಹ ಕಾರುಗಳಿಗೆ ‘ರೆವಾ’ ಎಂದು ಹೆಸರಿಡಲಾಗಿದೆ. ಮತ್ತು ಕ್ಯಾಲಿಫೋರ್ನಿಯಾದಲ್ಲಿ ಈ ರೇವಾ ಮೋಟಾರ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು ದೊಡ್ಡಪ್ರಮಾಣದಲ್ಲಿ ಉತ್ಪಾದನೆಯೂ ಅಗುತ್ತಲಿದೆ.

ಅಸಿಡ್‌ನಿಂದ ಹರಿಯುವ ವಿದ್ಯುತ್‌ನಿಂದ ಚಲಿಸುವ ಶಕ್ತಿಯನ್ನುಈ ಕಾರು ಪಡೆದಿದ್ದು ಕೆಳಭಾಗದಲ್ಲಿ ಇದನ್ನು ಅಳವಡಿಸಲಾಗದೆ. 6 ಅಶ್ವ ಶಕ್ತಿಯುಳ್ಳ ಈ ಬ್ಯಾಟರಿಗಳನ್ನು 3 ವರ್ಷಗಳಿಗೊಮ್ಮೆ ಬದಲಿಸಬೇಕಾಗುತ್ತದೆ. ಅಗಾಗ ಬಿಡಿ ಭಾಗಗಳನ್ನು ಕಳಚಿ ದುರಸ್ತಿಮಾಡಿ ಮತ್ತೆ ಜೋಡಿಸಬೇಕಾಗುತ್ತದೆ. ಇದಕ್ಕಾಗಿ 18-22 ಸಾ. ರೂ. ಖರ್ಚಾಗಬಹುದು ಈಗಾಗಲೇ ಕರ್ನಾಟಕದ ಕೋಲಾರ ಜಿಲ್ಲೆಯ ಹೂಮಾರಿನಲ್ಲಿರುವ ಕಾರ್ಖಾನೆಯಲ್ಲಿ ಈ ರೇವಾ ಕಾರು ಉತ್ಪಾದನೆಯಾಗಲಿದ್ದು ಅರಂಭದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಲಭ್ಯವಾಗುವ ಈ ಕಾರಿಗೆ ನೇಪಾಳ, ಶ್ರೀಲಂಕಾ, ಮೆಕ್ಸಿಕೋ ಮತ್ತು ಜರ್ಮನಿ ದೇಶಗಳಿಂದ ಬೇಡಿಕೆ ಬಂದಿದೆ ಎಂದು ಹೇಳುತ್ತಾರೆ. ಸದ್ಯ ವರ್ಷಕ್ಕೆ 6000 ಕಾರುಗಳನ್ನು ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ 20,000 ಕಾರುಗಳ ತಯಾರಿಕೆ ಆಗಲಿದೆ. ‘ರೇವಾ’ ಕಾರಿಗೆ ಒಮ್ಮೆವಿದ್ಯುತ್ ಚಾಲನೆ ಮಾಡಿದರೆ 80 ಕಿ. ಮೀ ದೂರದವರೆಗೆ ನಿರಂತರವಾಗಿ ಚಲಿಸಬಲ್ಲದು. ಈ ವಿದ್ಯುತ್ತಿಗಾಗಿ ಮಾಡುವ ವೆಚ್ಚ ಕೇವಲ 22 ರೂಪಾಯಿ! ಮುಂದುಗಡೆ ಇಬ್ಬರು ದೊಡ್ಡವರಿಗೆ ಹಿಂದೆ ಇಬ್ಬರು ಮಕ್ಕಳು ಒಟ್ಟು 225 ಕೆ.ಜಿ. ಭಾರ ಹೊರುತ್ತದೆ. ವಾತಾವರಣದ ನಿಯಂತ್ರಣದಕ್ಕೊಳಪಟ್ಟು ಸಿದ್ದವಾದ ಈ ಕಾರು ಚಳಿಗಾಲದಲ್ಲಿ ಸೀಟುಗಳು ಬೆಚ್ಹಿಗಿದ್ದರೆ, ಬೇಸಿಗೆಯಲ್ಲಿ ತಂಪಾಗುವಂತೆ ರೂಪಿಸಲಾಗಿದೆ. ವಿದ್ಯುತ್ ಚಾರ್ಜನ್ನು 15 ಎ ವಾಲ್ ಪ್ಲಗ್ ಮೂಲಕ ಮಾಡಬೇಕಾಗುತ್ತದೆ. ಎಂಟುಗಂಟೆಗಳವರೆಗೆ ಅದ ಚಾರ್ಜ್ ಬೆಲೆ ರೂ. 22, ವಿದ್ಯುತ್ ಕೊರತೆಯಾದಲ್ಲಿ ಪೆಟ್ರೋಲ್ ಬಂಕ್‌ಗಳ ಮಾದರಿಯಲ್ಲಿ ಅಲ್ಲಲ್ಲಿ ಕಾರಿಗೆ ವಿದ್ಯುತ್ ತುಂಬಬಲ್ಲ ಡೀಜಲ್ ಜನರೇಟರ್‌ಗಳನ್ನು ಸ್ಥಾಪಿಸಲಾಗುತ್ತದೆಂದು ಕಾರು ತಯಾರಕರು ಹೇಳುತ್ತಾರೆ. ರೇವಾ ಕಾರು ಒಡಿಸುವವರಿಗೆ 5 ವರ್ಷಗಳವರಗೆ ರಸ್ತೆ ತೆರಿಗೆ ವಿನಾಯ್ತುಯನ್ನು ನೀಡಲಾಗುತ್ತದೆಂದು ತಿಳಿಸಿದೆ. ತೆರಿಗೆ ಮುನ್ನ ರೂ. 1.65 ಲಕ್ಷ (ಅಂದಾಜು) 225 ಕೆ.ಜಿ. ಭಾರವನ್ನು ಈ ಕಾರು ಹೊರಬಲ್ಲದು. 65 ಕಿ.ಮೀ. ಗಂಟೆಗೆ ಚಲಿಸುವ ಈ ಕಾರಿನ ತೂಕ 672 ಕೆ.ಜಿ. ಇರುತ್ತೆದೆ. 2638 ಎಂ.ಎಂ. ಉದ್ಧವಿರುವ ಈ ಕಾರು 1324 ಎಂ. ಎಂ. ಅಗಲವಿರುತ್ತದೆ. 11510 ಎಂ.ಎಂ. ಎತ್ತರವಿರುತ್ತದೆಂದು ಇದರ ಲಕ್ಷಣ ತಿಳಿಸುತ್ತದೆ.

ಇದರಂತೆ ಅಮೇರಿಕಾದಲ್ಲಿ ಇದೀಗ ತಯಾರಾದ ‘ಇವಿ’ ಕಾರುಗಳಲ್ಲಿ ‘ಮೆಟಲ್  ಹೈಡ್ರೈಟ್’ ಬ್ಯಾಟರಿಯನ್ನು ಬಳಸುವ ಕಾರುಗಳನ್ನು ತಯಾರಿಸಿದ್ದು ಒಮ್ಮೆಚಾರ್ಜ್ ಮಾಡಿದರೆ ಸತತವಾಗಿ 200 ಕಿ.ಮೀ. ಓಡುತ್ತವೆ.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈಗಷ್ಟೆ ಮುಗಿದಿದೆ ಉರಿಬೇಸಿಗೆ
Next post ಕೆಳದಿ ಚೆನ್ನಮ್ಮಳ ಕವಲೇ ದುರ್ಗಕ್ಕೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys